ಫೆಬ್ರವರಿ 4ರಂದು ಬೆಂಗಳೂರು ಬಂದ್ ಗೆ ಅನುಮತಿಯಿಲ್ಲ, ಅಂದ್ರು ರಾಮಲಿಂಗಾ ರೆಡ್ಡಿ | Oneindia Kananda

2018-01-31 91

Is there a Bengaluru bandh on February 4? Farmers organizations and activists from North Karnataka had called for a bandh on February 4 coinciding with Prime Minister Narendra Modi's visit to Bengaluru. However some farmers have said that it would be an insult to the PM to call for a bandh on that day and also seek time with him. But now Ramalinga Reddy says, Permission has not been given for Bengaluru Bandh.

ಯಾವ ಒಂದು ಹೋರಾಟ ಸಮಿತಿ ಮಂಚೂಣಿಯಲ್ಲಿ ನಿಂತು ಪ್ರತಿಭಟನೆ ನಡೆಸಬೇಕಾಗಿತ್ತೋ, ಆ ಸಂಘಟನೆಯೇ ಭಾನುವಾರ, ಫೆಬ್ರವರಿ 4ರಂದು ಕರೆಯಲಾಗಿರುವ ಬೆಂಗಳೂರು ಬಂದ್ ನಿಂದ ಹಿಂದಕ್ಕೆ ಸರಿದಿದೆ.

ಮಹಾದಾಯಿ ಹೋರಾಟ ಸಮಿತಿ ಬೆಂಗಳೂರು ಬಂದ್ ಗೆ ತಮ್ಮ ಬೆಂಬಲವಿಲ್ಲ ಎಂದು ಘೋಷಿಸುವ ಮೂಲಕ, ಮಾತೆತ್ತಿದರೆ ಬಂದ್ ಗೆ ಕರೆ ನೀಡುವ ಕನ್ನಡಪರ ಸಂಘಟನೆಗಳು ತೀವ್ರ ಮುಜುಗರ ಎದುರಿಸಬೇಕಾಗಿ ಬಂದಿದೆ.

ಮಹಾದಾಯಿ ಹೋರಾಟ ಸಮಿತಿಯ ಮುಖ್ಯಸ್ಥ ವೀರೇಶ್ ಸೊಬರದಮಠ ಈ ಸಂಬಂಧ ಹೇಳಿಕೆ ನೀಡಿ, ಬಂದ್ ನಿಂದ ಯಾವುದೇ ಪರಿಹಾರ ಸಿಗದು ಎನ್ನುವುದನ್ನು ನಾವು ಮನವರಿಕೆ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಇದೇ ಸಮಯದಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಬೆಂಗಳೂರು ಬಂದ್ ಬಗ್ಗೆ ಮಾತನಾಡಿದ್ದು ಸರ್ಕಾರದಿಂದ ಬಂದ್ ಗೆ ಅನುಮತಿ ಕೊಟ್ಟಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ನರೇಂದ್ರ ಮೋದಿಯವರು ಬರುವ ಸಂಧರ್ಭದಲ್ಲಿ ಬೆಂಗಳೂರು ಬಂದ್ ಗೆ ಅವಕಾಶ ಇಲ್ಲ ಎಂದು ಖಡಕ್ ಆಗಿ ನುಡಿದ್ದಾರೆ

Free Traffic Exchange